ನೈಸ್ ಸ್ಕ್ಯಾಮ್
ನೈಸ್ (NICE – Nandi Infrastructure Corridor Enterprises) ಹಗರಣ: ಸಾರ್ವಜನಿಕ ಯೋಜನೆಯಿಂದ ಖಾಸಗಿ ರಿಯಲ್ ಎಸ್ಟೇಟ್ ದಂಧೆಯತ್ತ…
ಏನಿದು ನೈಸ್ (NICE) ಯೋಜನೆ? ಯೋಜನೆ ಪ್ರಕಾರ ಮಾಡಬೇಕಿದ್ದೇನು?
3 April 1997 ರಂದು ಸಹಿ ಮಾಡಲಾದ ಫ್ರೇಮ್ವರ್ಕ್ ಒಪ್ಪಂದದ (FWA) ಪ್ರಕಾರ, ನೈಸ್ ಸಂಸ್ಥೆಯು ಒಟ್ಟು 20,193 ಎಕರೆ ಜಮೀನಿನಲ್ಲಿ ಪ್ರಮುಖ ಸಾರ್ವಜನಿಕ ಮೂಲಸೌಕರ್ಯ ಯೋಜನೆಯನ್ನು ನಿರ್ಮಿಸಬೇಕಿತ್ತು.
ಬೆಂಗಳೂರು ಮತ್ತು ಮೈಸೂರು ನಡುವೆ 111 km ಎಕ್ಸ್ಪ್ರೆಸ್ವೇ.
41 km ಪೆರಿಫೆರಲ್ ರಸ್ತೆ ಮತ್ತು 9.8 km ಲಿಂಕ್ ರಸ್ತೆ.
5 ಯೋಜಿತ ಟೌನ್ಶಿಪ್ಗಳು.
ಟೋಲ್ ಪ್ಲಾಜಾಗಳು, ಸರ್ವಿಸ್ ರಸ್ತೆಗಳು, ನಿರ್ವಹಣಾ ಕೇಂದ್ರಗಳು ಮತ್ತು ಟ್ರಕ್ ಟರ್ಮಿನಲ್ಗಳು.
ಖಾಸಗಿ ಲಾಭಕ್ಕಾಗಿ ನೈಸ್ ಮಾಡಿದ ಪ್ರಮುಖ ಅಕ್ರಮಗಳು:
ಅಪೂರ್ಣ ಯೋಜನೆ: ಸುಮಾರು 26 ವರ್ಷಗಳು ಕಳೆದರೂ 111 km ಎಕ್ಸ್ಪ್ರೆಸ್ವೇ ಪೈಕಿ ಕೇವಲ 5 km ಮಾತ್ರ ಪೂರ್ಣಗೊಂಡಿದೆ. 5 ಟೌನ್ಶಿಪ್ಗಳಲ್ಲಿ ಒಂದೂ ನಿರ್ಮಾಣವಾಗಿಲ್ಲ.
ಹೆಚ್ಚುವರಿ ಭೂ ಆಕ್ರಮಣ: ಪೆರಿಫೆರಲ್ ರಸ್ತೆಗೆ 2,193 ಎಕರೆ ಮಂಜೂರಾಗಿದ್ದರೆ, ನೈಸ್ ಸಂಸ್ಥೆಯು 2,747 ಎಕರೆ (ಸುಮಾರು 554 ಎಕರೆ ಹೆಚ್ಚುವರಿ) ಜಮೀನನ್ನು ವಶಪಡಿಸಿಕೊಂಡಿದೆ.
ರಿಯಲ್ ಎಸ್ಟೇಟ್ ದಂಧೆ: ರಸ್ತೆ ಮತ್ತು ಮೂಲಸೌಕರ್ಯಕ್ಕೆ ನೀಡಿದ ಜಮೀನನ್ನು ಖಾಸಗಿ ರಿಯಲ್ ಎಸ್ಟೇಟ್ ಅಭಿವೃದ್ಧಿ, ಮಾರಾಟ, ಗುತ್ತಿಗೆ ಮತ್ತು ಜಂಟಿ ಅಭಿವೃದ್ಧಿ (Joint Development) ಒಪ್ಪಂದಗಳಿಗೆ ಕಾನೂನುಬಾಹಿರವಾಗಿ ಬಳಸಲಾಗಿದೆ.
ಕಾನೂನುಬಾಹಿರ ಟೋಲ್ ವಸೂಲಿ: ಒಪ್ಪಂದದಂತೆ ಸಿಮೆಂಟ್-ಕಾಂಕ್ರೀಟ್ ರಸ್ತೆ ನಿರ್ಮಿಸದೆ, ತಾತ್ಕಾಲಿಕ ಡಾಂಬರು (ಬಿಟುಮಿನ್) ರಸ್ತೆ ನಿರ್ಮಿಸಿ, ತಾಂತ್ರಿಕ ಮಾನದಂಡಗಳನ್ನು ಪೂರೈಸದಿದ್ದರೂ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಅಕ್ರಮ ಟೋಲ್ ವಸೂಲಿ ಮಾಡಲಾಗುತ್ತಿದೆ.
ಸರ್ಕಾರ ಮತ್ತು ಸಂಸ್ಥೆಗಳ ಕಣ್ಣುಮುಚ್ಚಾಲೆ ಹಾಗೂ ವಿಫಲತೆ:
KIADB ಮತ್ತು PWD ಸಂಸ್ಥೆಗಳು ಒಪ್ಪಂದದ ಮಿತಿಗಿಂತ ಹೆಚ್ಚಿನ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ನೀಡಿದ್ದರೂ, ಅದನ್ನು ಮರಳಿ ಪಡೆಯಲು ವಿಫಲವಾಗಿವೆ.
ಜಮೀನು ಕಳೆದುಕೊಂಡ ಬಡ ರೈತರಿಗೆ 11 ರಿಂದ 23 ವರ್ಷಗಳಾದರೂ ಪರಿಹಾರ ಹಣವನ್ನೇ ಪಾವತಿಸದೆ ಅವರ ಬದುಕನ್ನು ಬೀದಿಗೆ ತಳ್ಳಲಾಗಿದೆ.
ವಿಧಾನಮಂಡಲ ಜಂಟಿ ಸದನ ಸಮಿತಿಯು ನೈಸ್ (NICE) ಸಂಸ್ಥೆಯು ಒಪ್ಪಂದದ 22 ಪ್ರಮುಖ ಷರತ್ತುಗಳಲ್ಲಿ 16 ಷರತ್ತುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ ಎಂದು ವರದಿ ನೀಡಿ, CBI ತನಿಖೆಗೆ ಶಿಫಾರಸು ಮಾಡಿತ್ತು.
ಹೈಕೋರ್ಟ್ ಆದೇಶದ ನಂತರ ನೈಸ್ (NICE) ವಿಫಲತೆ ಬಹಿರಂಗ:
ನ್ಯಾಯಾಲಯದ ಕಟು ಎಚ್ಚರಿಕೆ: July 2026 ರಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿ, ಪರಿಹಾರ ನೀಡದೆ 11 ರಿಂದ 23 ವರ್ಷಗಳ ಕಾಲ ರೈತರ ಜಮೀನನ್ನು ಅನಿರ್ದಿಷ್ಟಾವಧಿಯವರೆಗೆ ಸ್ವಾಧೀನದಲ್ಲಿಟ್ಟುಕೊಳ್ಳುವುದು ಕಾನೂನುಬಾಹಿರ ಎಂದು ಸ್ಪಷ್ಟಪಡಿಸಿದೆ.
2020 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಸ್ಪಷ್ಟನೆಯಂತೆ, FWA ಒಪ್ಪಂದವನ್ನು ಮೀರಿದ ಯಾವುದೇ ಹಕ್ಕು ನೈಸ್ ಸಂಸ್ಥೆಗೆ ಇಲ್ಲ. ಅಲ್ಲದೆ ಅಪೂರ್ಣ ಕಾಮಗಾರಿ, ಪರಿಹಾರ ನೀಡದಿರುವುದು ಅಥವಾ ಜಮೀನಿನ ಅಕ್ರಮ ವಾಣಿಜ್ಯ ಬಳಕೆಗೆ ಯಾವುದೇ ನ್ಯಾಯಾಲಯದ ಅಭಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಈಗ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕಿದೆ:
ಈಗ ಉನ್ನತ ನ್ಯಾಯಾಲಯವು ಸ್ಪಷ್ಟ ಆದೇಶ ನೀಡಿದ್ದರೂ ಸಹ, ಸರ್ಕಾರ ಮೌನವಾಗಿರಲು ಸಾಧ್ಯವಿಲ್ಲ. ಹೈಕೋರ್ಟ್ ತೀರ್ಪನ್ನು ರಾಜ್ಯ ಸರ್ಕಾರವು ತಕ್ಷಣವೇ ಅನುಷ್ಠಾನಗೊಳಿಸಬೇಕು. ದಶಕಗಳಿಂದ ವಂಚನೆಗೊಳಗಾದ ರೈತರಿಗೆ ಸೂಕ್ತ ನ್ಯಾಯ ಒದಗಿಸುವುದು ಹಾಗೂ ದಿನನಿತ್ಯ ನೈಸ್ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರನ್ನು ಅಕ್ರಮ ಟೋಲ್ ಸುಲಿಗೆಯಿಂದ ಮುಕ್ತಿಗೊಳಿಸಿ ರಕ್ಷಿಸುವುದು ಸರ್ಕಾರದ ನೈತಿಕ ಮತ್ತು ಕಾನೂನಾತ್ಮಕ ಕರ್ತವ್ಯವಾಗಿದೆ.
ನಮ್ಮ ಅಭಿಯಾನ
ಕೇಂದ್ರ ಸಚಿವರಾದ ಶ್ರೀ ಹೆಚ್. ಡಿ. ಕುಮಾರಸ್ವಾಮಿ ಅವರ ಪರಿಕಲ್ಪನೆಯಲ್ಲಿ ರೂಪಿತವಾಗಿರುವ #NothingNICE ಅಭಿಯಾನವು ದಶಕಗಳಿಂದ ನಡೆಯುತ್ತಿರುವ ನೈಸ್ (NICE) ಯೋಜನೆಯ ಅಕ್ರಮಗಳ ವಿರುದ್ಧ ಧ್ವನಿ ಎತ್ತುವ ಪ್ರಮುಖ ಜನಾಂದೋಲನವಾಗಿದೆ. ಯೋಜನೆಗಾಗಿ ಎಫ್ಡಬ್ಲ್ಯೂಎ (FWA) ಒಪ್ಪಂದದ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದ್ದರೂ ಮತ್ತು ಹೈಕೋರ್ಟ್ ಮಹತ್ವದ ಆದೇಶ ನೀಡಿದ್ದರೂ ಸಹ ರಾಜ್ಯ ಸರ್ಕಾರವು ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಮೌನ ವಹಿಸಿದೆ.
ಇನ್ನೊಂದೆಡೆ ಒಪ್ಪಂದದ ಷರತ್ತುಗಳನ್ನು ಗಾಳಿಗೆ ತೂರಿ ಸಾರ್ವಜನಿಕರಿಂದ ಅತಿಯಾದ ಹಾಗೂ ನಿಯಮಬಾಹಿರ ಟೋಲ್ ದರವನ್ನು ವಸೂಲಿ ಮಾಡಲಾಗುತ್ತಿದೆ. ಜತೆಗೆ ಭೂಮಿ ಕಳೆದುಕೊಂಡ ಸಾವಿರಾರು ರೈತರಿಗೆ ಸೂಕ್ತ ಪರಿಹಾರ ಸಿಗದೆ ಅವರ ಬದುಕು ಬೀದಿಗೆ ಬಿದ್ದಿದ್ದರೂ ಸರ್ಕಾರ ನೈಸ್ ಸಂಸ್ಥೆಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ. ಆದ್ದರಿಂದ ರಾಜ್ಯ ಸರ್ಕಾರವು ತಕ್ಷಣವೇ ಹೈಕೋರ್ಟ್ ತೀರ್ಪನ್ನು ಜಾರಿಗೆ ತಂದು ಕಾನೂನುಬಾಹಿರ ಟೋಲ್ ಬಂದ್ ಮಾಡಬೇಕು ಮತ್ತು ನೊಂದ ರೈತರಿಗೆ ತಕ್ಷಣವೇ ನ್ಯಾಯ ಒದಗಿಸಬೇಕು ಎಂಬ ಆಗ್ರಹದೊಂದಿಗೆ, ನ್ಯಾಯಕ್ಕಾಗಿ ನಾವೆಲ್ಲರೂ ಒಂದಾಗಿ ಹೋರಾಡೋಣ!
ಬೇಡಿಕೆಗಳು
ಟೋಲ್ ನಿಲ್ಲಿಸಿ: ಎಫ್ಡಬ್ಲ್ಯೂಎ (FWA) ಒಪ್ಪಂದದ ನಿಯಮ 6.6.3 ಮತ್ತು 16.6 ರ ಪ್ರಕಾರ ನಿಗದಿತ ಸಮಯದಲ್ಲಿ ಯೋಜನೆ ಪೂರ್ಣಗೊಳಿಸದ ಕಾರಣ, ನೈಸ್ ಸಂಸ್ಥೆಯ ಟೋಲ್ ಸಂಗ್ರಹಿಸುವ ಹಕ್ಕನ್ನು ತಕ್ಷಣವೇ ರದ್ದುಗೊಳಿಸಿ ರಸ್ತೆಯನ್ನು ರಾಜ್ಯ ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳಬೇಕು.
ರೈತರ ಭೂಮಿ ವಿಮುಕ್ತಿ (ಡಿ-ನೋಟಿಫಿಕೇಶನ್): ಹೈಕೋರ್ಟ್ ತೀರ್ಪಿನಂತೆ (W.P. No. 50634/2014 & W.A. 1214/2025), ದಶಕಗಳಿಂದ ಭೂಸ್ವಾಧೀನ ಪ್ರಕ್ರಿಯೆ ಮುಗಿಸದೆ ಮತ್ತು ಪರಿಹಾರ ನೀಡದೆ ಬಾಕಿ ಉಳಿಸಿಕೊಂಡಿರುವ ಕೆಐಎಡಿಬಿ (KIADB) ಕಾಯ್ದೆಯಡಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ತಕ್ಷಣವೇ ವಿಮುಕ್ತಿಗೊಳಿಸಿ ರೈತರಿಗೆ ಮರಳಿಸಬೇಕು.
ಸೂಕ್ತ ಪರಿಹಾರ: ಈಗಾಗಲೇ ರಸ್ತೆ ನಿರ್ಮಾಣಕ್ಕೆ ಬಳಸಿರುವ ಭೂಮಿಗೆ 2013 ರ ಕಾಯ್ದೆಯಂತೆ ರೈತರಿಗೆ ತಕ್ಷಣ ಸೂಕ್ತ ಮಾರುಕಟ್ಟೆ ಪರಿಹಾರ ಮತ್ತು ದಶಕಗಳ ವಿಳಂಬಕ್ಕೆ ಹಿಂಬಾಕಿ ಬಡ್ಡಿಯನ್ನು ಪಾವತಿಸಬೇಕು.
ಹೆಚ್ಚುವರಿ ಭೂಮಿ ಮುಟ್ಟುಗೋಲು: ಎಫ್ಡಬ್ಲ್ಯೂಎ ಒಪ್ಪಂದದ ಮಿತಿಗಿಂತ ಹೆಚ್ಚಾಗಿ ವಶಪಡಿಸಿಕೊಂಡ ಅಥವಾ ಯೋಜನೇತರ ಉದ್ದೇಶಕ್ಕೆ ಬಳಸಲಾದ ಭೂಮಿಯನ್ನು ಸರ್ಕಾರ ಹಿಂಪಡೆದು ಮೂಲ ಮಾಲೀಕರಿಗೆ ಹಿಂದಿರುಗಿಸಬೇಕು
ಭಾಗವಹಿಸಿ
#NothingNICE ಚಳುವಳಿಗೆ ಕೈಜೋಡಿಸಿ!
ನಮ್ಮ ನೆಲ, ಜಲ ಮತ್ತು ರೈತರ ಹಕ್ಕುಗಳಿಗಾಗಿ ಪ್ರಾರಂಭವಾಗಿರುವ ಈ ಮಹತ್ವದ ಹೋರಾಟಕ್ಕೆ ನಿಮ್ಮ ಬೆಂಬಲ ಅತ್ಯಗತ್ಯ. ಬೆಂಗಳೂರಿನ ಸುಸ್ಥಿರ ಭವಿಷ್ಯಕ್ಕಾಗಿ ಮತ್ತು ನೈಸ್ (NICE) ಯೋಜನೆಯಿಂದ ತೊಂದರೆಗೊಳಗಾದ ರೈತರಿಗೆ ನ್ಯಾಯ ಸಿಗಲು ಕನ್ನಡಿಗರೆಲ್ಲರೂ ಒಂದಾಗಬೇಕಿದೆ.
ಫಾರ್ಮ್ ಭರ್ತಿ ಮಾಡಿ: ನಿಮ್ಮ ವಿವರಗಳನ್ನು ನಮೂದಿಸಿ, ಈ ಹೋರಾಟದಲ್ಲಿ ನೇರವಾಗಿ ಭಾಗವಹಿಸಿ.
#NothingNICE ಧ್ವನಿಯಾಗಿ: ಸಾಮಾಜಿಕ ಜಾಲತಾಣಗಳಲ್ಲಿ #NothingNICE ಹ್ಯಾಶ್ಟ್ಯಾಗ್ ಬಳಸಿ ಜಾಗೃತಿ ಮೂಡಿಸಿ.
ಜನರನ್ನು ಸಂಘಟಿಸಿ: ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಂದ ಫಾರ್ಮ್ ಭರ್ತಿ ಮಾಡಿಸುವ ಮೂಲಕ ನಮ್ಮ ಹೋರಾಟಕ್ಕೆ ಶಕ್ತಿ ತುಂಬಿ.
ದಾಖಲೆಗಳು

ಸರ್ವೋಚ್ಛ ನ್ಯಾಯಾಲಯದ 20 April 2006
Download

ಉಚ್ಚ ನ್ಯಾಯಾಲಯದ ಆದೇಶ July 2025
Download

ಉಚ್ಚ ನ್ಯಾಯಾಲಯದ ಆದೇಶ July 2026
Download

ಫ್ರೇಮ್ ವರ್ಕ್ ಅಗ್ರಿಮೆಂಟ್
Download

ಸದನ ಸಮಿತಿ ವರದಿ
Download